ಗೌರಿಬಿದನೂರು ತಾಲೂಕಿನ ಕನಾಯಕನಹಳ್ಳಿ ಗ್ರಾಮ ಸೇರಿದಂತೆ ವಿವಿದೆಡೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..ಗೌರಿಬಿದನೂರು ತಾಲೂಕಿನ ನರೇಶ್, ಆಕಾಶ್, ಶಂಶಾಕ್ ಮತ್ತು ಪ್ರಜ್ವಲ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ..ಇನ್ನೂ ಬಂಧಿತ ಆರೋಪಿಗಳಿಂದ 38 ಸಾವಿರ ಬೆಲೆ ಬಾಳುವ ಗಾಂಜಾ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ...ಇನ್ನೂ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪೊಲೀಸರು ಗುಸ್ತಿನಲ್ಲಿದ್ದ ವೇಳೆ ಅನುಮಾನಸ್ಪದ ರೀತಿಯಲ್ಲಿ ಬೈಕ್ ಮೇಲೆ ಬ್ಯಾಗ್ ಇಟ್ಟಿಕೊಂಡು ಯಾರಿಗೋ ಕಾಯುತ್ತಿದ್ದು ಇದನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದ ವೇಳೆ ಗಾಂಜಾ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.