ದಾಂಡೇಲಿ : ಪೋಲಿಸ್ ಇಲಾಖೆ ಹೀಗಿರಬೇಕು ಅಂದರೆ ನಮ್ಮ ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣೆಯಂತಿರಬೇಕು ಅಂತಾರೆ ದಾಂಡೇಲಿ ತಾಲೂಕಿನ ಜನತೆ. ಹೌದು, ಪೋಲಿಸ್ ಇಲಾಖೆ ಅಂದರೆ ದರ್ಪ, ಅಹಂಕಾರ, ಒರಟು ಎನ್ನುವ ಜನಾಭಿಪ್ರಾಯದ ನಡುವೆಯು ಪೋಲಿಸ್ ಇಲಾಖೆ ಅಂದರೆ ಜನಸ್ನೇಹಿ ಇಲಾಖೆ ಎನ್ನುವುದನ್ನು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ತನ್ನ ಜನಪರ ಕಾರ್ಯ ಚಟುವಟಿಕೆಗಳ ಮೂಲಕ ಸಾರಿ ಹೇಳುತ್ತಿದೆ. ಅಂದಹಾಗೆ ಪ್ರತಿ ವರ್ಷದಂತೆ ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣೆಯ ಆವರಣದಲ್ಲಿ ಶ್ರೀ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಚೌತಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುವ ಪರಂಪರೆಯನ್ನು ಈ ವರ್ಷವೂ ಮುಂದುವರೆಸಿಕೊಂಡು ಬಂದಿದೆ.