ಸೆಪ್ಟೆಂಬರ್ 6 ರಂದು ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ರಾಜಭೀದಿ ಉತ್ಸವ ನಡೆಯಲಿದೆ ಇದಕ್ಕಾಗಿ ಸಿದ್ಧತೆ ಆರಂಭವಾಗಿದೆ. ಶಿವಮೊಗ್ಗ ನಗರ ಸಂಪೂರ್ಣ ಕೇಸ್ರಿಮಯ್ಯಗೊಂಡಿದೆ ಅಲ್ಲಲ್ಲಿ ಮಹಾದ್ವಾರಗಳನ್ನ ನಿರ್ಮಿಸಲಾಗಿದೆ. ಗಾಂಧಿಬಜಾರ್ ಮುಂಭಾಗ ಪ್ರತಿ ವರ್ಷದಂತೆ ಈ ಬಾರಿಯೂ ವಿಭಿನ್ನ ಮಹಾದ್ವಾರ ಸ್ಥಾಪಿಸಲಾಗಿದ್ದು, ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಅಮೃತಕ್ಕಾಗಿ ಹಾಲಿನ ಸಮುದ್ರವನ್ನು ಕಡೆಯುವ ಕತೆಯನ್ನ ಈ ಬಾರಿಯ ಮಹದ್ವಾರ ಹೇಳುತ್ತಿದೆ.ಗುರುವಾರ ಸಂಜೆ ಸಾರ್ವಜನಿಕರು ಮಹಾದ್ವಾರದ ಮುಂದೆ ನಿಂತು ಸೆಲ್ಫಿ ಕ್ಲಿಕಿಸಿಕೊಂಡು ಸಂಭ್ರಮಿಸುತ್ತಿದ್ದರು.