*ಈರುಳ್ಳಿ ಬೆಲೆ ಕುಸಿತದಿಂದ ಸಾಲದ ಸುಳಿಗೆ ಸಿಲುಕಿದ ರೈತ* ಮೊಳಕಾಲ್ಮುರು:-ಪಾತಾಳ ಮುಟ್ಟಿದ ಈರುಳ್ಳಿ ಬೆಲೆಯಿಂದ ರೈತಾಪಿ ವರ್ಗ ಕಂಗಾಲಾಗಿದ್ದು, ಮೊದಲೇ ನೀರಿಲ್ಲದೆ ಬರಗಾಲ ಬವಣೆಯಿಂದ ಬಳಲುತ್ತಿರುವ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲೂಕಿನ ರೈತರಿಗೆ ಈರುಳ್ಳಿ ಬೆಲೆ ನೆಲ ಕಚ್ಚಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈರುಳ್ಳಿ ಬೆಳೆದ ರೈತನ ಸಂಕಷ್ಟ ಜೀವನವೇ ದುಸ್ತರಗೊಳಿಸಿದೆ. ಹೌದು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ನಾಯಕನಹಟ್ಟಿ ಹೋಬಳಿಯ ಬೋಸದೇವರಹಟ್ಟಿ ಗ್ರಾಮದ ರೈತ ರುದ್ರಮುನಿ ತನ್ನ ಎರಡು ಎಕರೆ ಹೊಲದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾನೆ.