ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಮಖಂಡಿ ಉಪವಿಭಾಗಾಧಿಕಾರಿಗಳ ಪಿಠೋಪಕರಣ ಜಪ್ತಿ ಮಾಡಲು ಆದೇಶ ಮಾಡಿದೆ. ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯವಾದಿ ಎಲ್ ಎನ್ ಸುನಗದ,ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರ ಓಡಾಡುವ ಸರ್ಕಾರಿ ವಾಹನವನ್ನು ಜಪ್ತಿ ಮಾಡಿದ್ದಾರೆ.ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ಬಾಳಪ್ಪ ನಿಂಗಪ್ಪ ಕಪ್ಪಲಗುದ್ದಿ ದರೆಪ್ಪ ಮುತ್ತಪ್ಪ ಕಪ್ಪಲಗುದ್ದಿ ಎಂಬುವವರ ಜಮೀನು ಕೆರೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. 4 ಎಕರೆ 28 ಗುಂಟೆ ಜಮೀನು ಭೂಸ್ವಾಧೀನಪಡಿಸಿಕೊಂಡು ಹಲವು ವರ್ಷ ಕಳೆದರೂ ಪರಿಹಾರ ನೀಡಿರಲಿಲ್ಲ.