ಬಾಗೇಪಲ್ಲಿ ತಾಲೂಕಿನಿಂದ ಬೇರ್ಪಟ್ಟ ನೂತನ ಚೇಳೂರು ತಾಲೂಕಿನ ಶಿವಪುರ ಸಮೀಪ ಶಾಶ್ವತ ನೀರಾವರಿ ಹೋರಾಟಗಾರ ಮಧುಸೀತಪ್ಪರವರು ತಮ್ಮ ಫಾರ್ಮ್ ಹೌಸ್ ನಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮಾಜಿ ಪ್ರಧಾನಿ ದೇವೆಗೌಡ,ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರ ತಮ್ಮ ಎಕ್ಸ್ ಖಾತೆಗಳಲ್ಲಿ ಸಂತಾಪ ವ್ಯಕ್ತ ಪಡಿಸಿದ್ದು, ಶಾಶ್ವತ ನೀರಾವರಿ ಹಾಗೂ ರೈತ ಪರ ಹೋರಾಟಗಾರರಾಗಿದ್ದ, ಪ್ರಖ್ಯಾತ ವೈದ್ಯ ಡಾ ಮಧು ಸೀತಪ್ಪ ಅವರ ಅಕಾಲಿಕ ನಿಧನ ಅತೀವ ದುಃಖ ತಂದಿದೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಅನೇಕ ಹೋರಾಟಗಳನ್ನು ರೂಪಿಸಿದ್ದರು.ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.