ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಬಾಗಲಕೋಟ ವಿಶ್ವ ವಿದ್ಯಾಲಯದ ಹತ್ತಿರದ ಚರಂಡಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.ಮೃತ ವ್ಯಕ್ತಿಯನ್ನ ಜಮಖಂಡಿ ನಗರದ ಕುಂಬಾರಗಲ್ಲಿಯ ೩೨ ವಯಸ್ಸಿನ ಶಿವು ಮಹಾಂತೇಶ್ ಸೋರಗಾವಿ ಎಂದು ಗುರುತಿಸಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಪಿ.ಎಸ್.ಐ ಅನೀಲ ಕುಂಬಾರ ಸಿಬ್ಬಂದ್ದಿಗಳಾದ ಸದಾಶಿವ ಹೊಸೂರ,ನಾಗರಾಜ ಬಿಸಲದಿನ್ನಿ,ರಾಜು ಶಿಂಘೆ,ಶಂಕರ ಆಸಂಗಿ,ರಾಜು ಮನಗೂಳಿ ಅವರ ಪೋಲಿಸ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಜಮಖಂಡಿ ಶಹರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.ಪೊಲೀಸರ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.