ಮೈಷುಗರ್ ಕಂಪನಿ ಆಸ್ತಿಯಲ್ಲಿ ಅಕ್ರಮವಾಗಿ 27.39 ಎಕರೆ ಭೂಮಿಯಲ್ಲಿ ಅಕ್ರಮವಾಗಿ ಅನುಭವದಲ್ಲಿ ಇರುವವರು ಕೂಡಲೇ ಮೈಷುಗರ್ ಕಂಪನಿ ಸ್ವಾಧೀನಕ್ಕೆ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಕಂಪನಿಯ ಸುಮಾರು 7.10 ಎಕರೆ ವಾಣಿಜ್ಯ ಭೂಮಿ ಹಾಗೂ ಸುಮಾರು 20.29 ಎಕರೆ ವ್ಯವಸಾಯ ಭೂಮಿಯು ಅನಧಿಕೃತ ಅನುಭವದಲ್ಲಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದರು. ಮೈಷುಗರ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅನುಭವದಲ್ಲಿರುವ ಭೂಮಿ ಪತ್ತೆಗೆ ತಹಶೀಲ್ದಾರ್ ಜೊತೆಗೂಡಿ ಕಂಪನಿಯ ಆಡಳಿತ ಮಂಡಳಿಯು ಇದೇ ಮೇ.12 ಮತ್ತು ಜೂನ್ 30ರಂದು ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರೊಂದಿಗೆ ಚರ್ಚಿಸಲಾಗಿದೆ.