ಯೂರಿಯಾ ಗೊಬ್ಬರವನ್ನು ಶಿಫಾರಸ್ಸಿಗಿಂತ ಹೆಚ್ಚಾಗಿ ಬಳಸುವುದರಿಂದ ಮನುಷ್ಯ ಆರೋಗ್ಯ, ಮಣ್ಣು ಮತ್ತು ಪರಿಸರದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತಿದ್ದು, ರೈತರು ಶಿಫಾರಸ್ಸಿನಂತೆ ಮಾತ್ರ ಯೂರಿಯಾ ಗೊಬ್ಬರ ಬಳಸುವುದು. ಇತ್ತೀಚೆಗೆ ಡಿಎಪಿ ಮತ್ತು ಕೋರಮಂಡಲ್ ಸಂಸ್ಥೆಗಳಿಂದ ನ್ಯಾನೋ ಯುರಿಯಾ ಮತ್ತು ನ್ಯಾನೋ ಡಿಎಪಿ ಗೊಬ್ಬರಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಹರಳು ರೂಪದ ಯೂರಿಯಾ ಗೊಬ್ಬರಕ್ಕೆ ಪಯಾಯವಾಗಿ ಬಳಸಬಹುದಾಗಿದೆ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಮುನಿರಾಜು ತಿಳಿಸಿದರು