ಆರ್ಯ ಸಮಾಜದ ತತ್ವ ಪ್ರಚಾರ ಮತ್ತು ಪ್ರಸಾರಕ್ಕೆ ದಿ. ಸುಭಾಷ್ ಅಷ್ಠಿಕರ್ ಕೊಡುಗೆ ಅನನ್ಯ ಎಂದು ಮಧ್ಯಪ್ರದೇಶದ ಆಚಾರ್ಯ ಅಖಿಲೇಶ್ ಶರ್ಮಾ ಅಭಿಪ್ರಾಯಪಟ್ಟರು. ನಗರದ ಆರ್ಯ ಸಮಾಜದಲ್ಲಿ ಆರ್ಯ ಸಮಾಜದ ರಾಷ್ಟ್ರೀಯ ಕಾರ್ಯಕಾರಿಣಿ ದಿ. ಸುಭಾಷ್ ಅಷ್ಠಿಕರ್ ನುಡಿ ನಮನ ಹಿನ್ನೆಲೆಯಲ್ಲಿ ಶನಿವಾರ ಸಂಜೆ 4ಕ್ಕೆ ಆಯೋಜಿಸಿದ್ದ ವಿಶೇಷ ಹವನ ಬಳಿಕ ಅವರು ಆಶಿರ್ವಚನ ನೀಡಿದರು. ಅಧ್ಯಕ್ಷ ನಾರಾಯಣರಾವ್ ಚದ್ರಿ, ದಯಾನಂದ ಅಷ್ಠಿಕರ್, ಗೋವಿಂದಸಿಂಗ್ ತಿವಾರಿ ಇದ್ದರು.