ಧಾರವಾಡದಲ್ಲಿ 36 ಭಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕರೇಪ್ಪಾ ಕಾಳೆ ಎಂಬುವವರಿಗೆ ಧಾರವಾಡ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಟ್ರಾಫಿಕ್ ಪಿ ಎಸ್ ಐ ಸೀತಾ ಕಟಗಿ ಅವರು ದಂಡ ವಿಧಿಸಿದ್ದಾರೆ. ಇನ್ನೂ ರಾಜ್ಯ ಗೃಹ ಇಲಾಖೆ ಅರ್ಧ ದಂಡ ಪಾವತಿಸುವ ಅವಕಾಶ ಹಿನ್ನೆಲೆಯಲ್ಲಿ ಒಟ್ಟು 9 ಸಾವಿರ ದಂಡವನ್ನು ಕರೇಪ್ಪಾ ಕಾಳೆ ಪಾವತಿ ಮಾಡಿದ್ದಾರೆ.