ಅಲೆಮಾರಿ ಜನಾಂಗದ ಜನರ ಸಮಸ್ಯೆಗಳನ್ನು ಕಲಘಟಗಿ ಪಟ್ಟಣದಲ್ಲಿ ಸೋಮವಾರ ಸಚಿವ ಸಂತೋಷ ಲಾಡ್ ಆಲಿಸಿದರು. ಪೌರಾಡಳಿತ ಇಲಾಖೆಯಿಂದ ನಗರೋತ್ಥಾನ ಯೋಜನೆಯಡಿ ಕಲಘಟಗಿ ಪಟ್ಟಣ ಪಂಚಾಯತ ಕಟ್ಟಡ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ನಗರದಲ್ಲಿ ಮೀಸಲಿರುವ ಜಾಗೆಯಲ್ಲಿ ಅಲೆಮಾರಿ ಜನಾಂಗದವರು ಅನಧಿಕೃತವಾಗಿ ಗುಡಿಸಲುಗಳನ್ನು ಪಟ್ಟಣ ಪಂಚಾಯತ ಅಧಿಕಾರಿಗಳು ಇತ್ತೀಚ್ಚೆಗೆ ತೆರವುಗೊಳಿಸಿದರು. ಅಲೆಮಾರಿ ಜನಾಂಗದ ಜನರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಭರವಸೆ ನೀಡಿದರು.