ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ರೈತರು ಬೆಳೆದಿದ್ದ ತೊಗರಿ ಬೆಳೆ ಒಣಗಲಾರಂಬಿಸಿದ್ದು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಸ್ಕಿ ತಾಲೂಕಿನ ನಾಗಲಾಪುರ ಗ್ರಾಮದ ರೈತ ವೆಂಕಟೇಶ ಎನ್ನುವವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಬೆಳೆ ನೀರಲ್ಲಿ ಹಾಗೆ ಒಣಗಿದ್ದು ಇದರಿಂದಾಗಿ ರೈತ ತುಂಭಾ ನೋವು ತೋಡಿಕೊಂಡು ಸರ್ಕಾರ ನೆರವಿಗೆ ಧಾವಿಸಿ ಬೆಳೆ ಒಣೆಗಿ ಹೋಗಿದ್ದು ಕೂಡಲೇ ಪರಿಹಾರವನ್ನು ನೀಡಬೇಕು ಇಲ್ಲವಾದಲ್ಲಿ ರೈತರಿಗೆ ದೊಡ್ಡ ಮಟ್ಟದ ಸಮಸ್ಯೆ ಉಂಟಾಗಲಿದೆ ಎಂದು ಸರ್ಕಾರಕ್ಕೆ ವಿನಂತಿಸಿದ್ದಾರೆ.