ಜಾತಿ ಮೀರಿ ಸಮಾಜಕ್ಕೆ ಕೊಡುಗೆ ನೀಡಿದ ಮಹಾನೀಯರ ಜಯಂತಿಗಳು ಜಾತ್ಯಾತೀತವಾಗಲಿ ಎಂದು ಚಿತ್ರದುರ್ಗ ಯಾದವ ಮಹಾಸಂಸ್ಥಾನದ ಜಗದ್ಗರು ಶ್ರೀ ಕೃಷ್ಣ ಯಾದವಾನಂದ ಮಹಾಸ್ವಾಮಿಜಿ ಅಭಿಪ್ರಾಯವ್ಯಕ್ತಪಡಿಸಿದರು.ಶನಿವಾರ ಸಂಜೆ 5 ಗಂಟೆಗೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ಮರೇನಹಳ್ಳಿ ರಸ್ತೆಯಲ್ಲಿನ ಯಾದವ ಸಮಾಜದ ಖಾಲಿ ನಿವೇಶನದಲ್ಲಿ ಹಮ್ಮಿಕೊಂಡಿದ್ದ ಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಮುದಾಯವನ್ನು ಎಸ್ ಟಿ ಮೀಸಲಾತಿ ಸೇರ್ಪಡೆ ಹೊರಾಟದ ಪೂರ್ವಭಾವಿ ಸಭೆಯನ್ನು ಆ.24 ರಂದು ಚಿತ್ರದುರ್ಗದ ಮಠದಲ್ಲಿ ಕರೆಯಲಾಗಿದೆ. ತಾಲೂಕಿನ ಮುಖಂಡರುಗಳು ಭಾಗವಹಿಸಿ ಸಲಹೆ ಸಹಕಾರ ನೀಡಬೇಕು ಎಂದರು.