ಚಿರತೆ ದಾಳಿಗೆ ಕರು ಬಲಿ: ಅರೆಬರೆ ತಿಂದು ಚಿರತೆ ಎಸ್ಕೇಪ್: ಬೆಚ್ಚಿಬಿದ್ದ ಜನ: ಚಿರತೆ ಸೆರೆ ಹಿಡಿಯಲು ಮನವಿ ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿ ಬಲಿ ಪಡೆದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕರಡಿಪಾಳ್ಯದಲ್ಲಿ ನಡೆದಿದೆ. ಘಟನೆ ಕಳೆದ ರಾತ್ರಿ ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ.ಕರಡಿಪಾಳ್ಯದ ನಿವಾಸಿ ತಿರುಪತಯ್ಯ ಎಂಬ ರೈತ ಮನೆ ಪಕ್ಕದಲ್ಲೇ ಹಸುಗಳಿಗಾಗಿ ಶೆಡ್ ನಿರ್ಮಿಸಿ ಎರಡು ಹಸು, ಎರಡು ಕರುಗಳನ್ನು ಶೆಡ್ ನಲ್ಲಿ ಬಿಟ್ಟಿದ್ದರು. ಕಳೆದ ರಾತ್ರಿ ಶೆಡ