ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿದ್ದಂತಹ ನಟೋರಿಯಸ್ ಕ್ರಿಮಿನಲ್ ಬಾಂಬೆ ಸಲೀಂ ನನ್ನು ಮತ್ತು ತಂಡವನ್ನು ವಿವಿಧ ಜೈಲುಗಳಿಗೆ ಶಿಫ್ಟ್ ಮಾಡಲಾಗುತ್ತಿದ್ದು,ಬಾಂಬೆ ಸಲೀಂ ನನ್ನು ಕೊಪ್ಪಳದ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಇಂದು ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ. ಇತ್ತೀಚೆಗೆ ಜಿಲ್ಲಾ ಕಾರಾಗೃಹದಲ್ಲಿ ಹಲವಾರು ಬೆಳವಣಿಗೆಗಳು ನಡೆದ ಹಿನ್ನೆಲೆಯಲ್ಲಿ ಮತ್ತು ಎರಡು ಅಪರಾಧಿಗಳ ತಂಡಗಳ ನಡುವೆ ಗಲಾಟೆ ಆಗುವಂತಹ ಸಂಭವ ಇದ್ದ ಕಾರಣ, ಬೇರೆ ಬೇರೆ ಜೈಲುಗಳಿಗೆ ಆ ತಂಡದ ಸದಸ್ಯರುಗಳನ್ನ ಶಿಫ್ಟ್ ಮಾಡಲಾಗುತ್ತಿದೆ ಎಂದು ಮಾಹಿತಿಯನ್ನು ನೀಡಿದರು.