ಶ್ರೀಗಂಧ ಮರ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಸಮೀಪ ನಡೆದಿದೆ. ಹನೂರು ತಾಲ್ಲೂಕಿನ ಬಿ.ಜಿ.ದೊಡ್ಡಿ ನಿವಾಸಿ ಚನ್ನಬಸಪ್ಪ ಬಂಧಿತ ಆರೋಪಿ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಅರಣ್ಯದಲ್ಲಿ ಒಣಗಿದ ಶ್ರೀಗಂಧ ಮರವನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಕಾರ್ಯಚರಣೆ ನಡೆಸಿ ಶ್ರೀಗಂಧ ಮರ ಸಮೇತ ವ್ಯಕ್ತಿಯನ್ನು ಬಂಧಿಸಿದ್ದಾರೆ. ಶ್ರೀಗಂಧ ಮರವನ್ನು ವಶಕ್ಕೆ ಪಡೆದು ಅರಣ್ಯಾಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.