ಚಿತ್ರದುರ್ಗ ಜಿಲ್ಲೆ, ಚಳ್ಳಕೆರಡ ತಾಲೂಕಿನಲ್ಲಿ ಮುಂಗಾರು ವೇಳೆ ಒಂದು ಹಂತದಲ್ಲಿ ಅಧಿಕ ಮಳೆಯಾಗಿ , ಮತ್ತೊಂದು ಹಂತದಲ್ಲಿ ಮಳೆ ಕೈಕೊಟ್ಟಿದ್ದು, ಲಕ್ಷಾಂತರ ರೂಪಾಯಿ ಭೂಮಿಗೆ ಬಂವಾಳ ಹಾಕಿ ರೈತರು ಮಾನ್ಸೂನ್ ಮಳೆಯೊಂದಿಗೆ ಜೂಜಾಟ ಆಡದಂತಾಗಿದೆ. ಚಳ್ಳಕೆರೆ ಭಾಗದಲ್ಲಿ ಕಪ್ಪು ಮಣ್ಣು ಜಮೀನಲ್ಲಿ ರೈತರು ಈರುಳ್ಳಿ ಬೆಳೆ ಹೆಚ್ಚಾಗಿ ಬೆಳೆಯುತ್ತಾರೆ. ಮುಂಗಾರಲ್ಲಿ ಉತ್ತಮ ಬೆಲೆ ಇರುತ್ತೆ ಅಂತಾ ಬಂಡವಾಳ ಹಾಕಿ ಈರುಳ್ಳಿ ಬೆಳೆ ಬೆಳೆಯುತ್ತಾರೆ. ಬಿತ್ತನೆ ಮಾಡಿದ ವೇಳೆ ಮಳೆ ಕೈ ಕೊಟ್ಟಿದ್ದರಿಂದ ಇಳುವರಿ ಕುಂಠಿತವಾಯಿತು. ಸಧ್ಯ ಮಧ್ಯ ಭಾಗ ಅಲ್ಪ ಸ್ವಲ್ಪ ಮಳೆಯಾದ್ದರಿಂದ ಹೇಗೋ ತಕ್ಕ ಮಟ್ಟಿಗೆ ಈರುಳ್ಳಿ ಬೆಳೆ ಫಸಲಿಗೆ ಬಂದಿದ್ದು ಈಗ ಮತ್ತೆ ಮಳೆ ಸುರಿಯುತ್ತಿದ್ದು, ಈರುಳ್ಳಿ ಜಮೀನಲ್ಲೇ ಕೊಳೆಯುವ ಭೀತಿ