ಮಳವಳ್ಳಿ : ದಲಿತ ಸಮುದಾಯದ ಒಳ ಮೀಸಲಾತಿ ಹೋರಾಟದಲ್ಲಿ ಬಲಗೈ ಸಮುದಾಯಕ್ಕೆ ಸೇರಿದ ಹೊಲೆಯ ಸಂಬಂಧಿಸಿದ ಜಾತಿಗ ಳಿಗೆ ಶೇ 6 ರಷ್ಟು ಮೀಸಲಾತಿ ನೀಡಿ ರುವ ರಾಜ್ಯ ಸರ್ಕಾರದ ತೀರ್ಮಾನ ಸಮಾಧಾನ ಕರವಾಗಿದೆ ಎಂದಿ ರುವ ಹೊಲೆಯ ಸಂಘಟನೆಗಳ ಒಕ್ಕೂಟದ ಮುಖಂಡರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಮುಖಂಡರನ್ನು ಅಭಿನಂದಿಸಿದ್ದಾರೆ. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇ ಶಿಸಿ ಮಾತನಾಡಿದ ಒಕ್ಕೂಟದ ಮುಖಂಡ ಎಂ ಎನ್ ಜಯರಾಜು ಅವರು ಒಳ ಮೀಸಲಾತಿಗಾಗಿ ನಿರಂತರವಾಗಿ ನಡೆದ ಹೋರಾಟ ದಲ್ಲಿ ತಪ್ಪು ಸಮೀಕ್ಷೆಯಿಂದಾಗಿ ಬಲಗೈ ಸಮುದಾಯ ಕಡಿಮೆ ಸಂಖ್ಯೆ ತೋರಿಸಿ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗಿತ್ತು ಎಂದು ವಿವರಿಸಿದರು.