ಯಲಿಯೂರಿನಲ್ಲಿ ಮಹಿಳೆಯೊಬ್ಬರ ಸರ ಅಪಹರಿಸಿ ಪರಾರಿಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಮತ್ತೊಬ್ಬ ಪರಾರಿಯಾಗಿರುವ ಘಟನೆ ಭಾನುವಾರ ಸಂಜೆ ಜರುಗಿದ್ದು ತಡವಾಗಿ ವರದಿಯಾಗಿದೆ. ಸುಂಡಹಳ್ಳಿಯ ಸರ್ವಮಂಗಳ ಎಂಬುವವರೇ ಸರ ಕಳೆದುಕೊಂಡವರು. ಕಳ್ಳ ತಾನು ಅಪಹರಿಸಿದ ಸರ ಒಪ್ಪಿಸದ ಹಿನ್ನೆಲೆಯಲ್ಲಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹೆಬ್ಬಾಡಿಹುಂಡಿಯ ಮನ್ಸೂರ್ ಆಹಮದ್ ಎಂಬುವವನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಮೈಸೂರಿನ ಬೀಡಿ ಕ್ವಾಟ್ರಾಸ್'ನ ಅಕ್ರಂ ಪಾಶ ಪರಾರಿಯಾಗಿದ್ದಾನೆ. ಯಲಿಯೂರು ಸಂತೆಯಿಂದ ತರಕಾರಿ ತೆಗೆದುಕೊಂಡು ಕಾಲುವೆ ರಸ್ತೆಯಲ್ಲಿ ಸುಂಡಹಳ್ಳಿ ಗೆ ತೆರಳುವಾಗ ಹಿಂದಿನಿಂದ ಬಂದ ಆರೋಪಿ ಕಾಲಿನಲ್ಲಿ ಹಿಂದಿನಿಂದ ಒದ್ದು ಬೀಳಿಸಿದ್ದಾನೆ.