ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟದ ಮೇಲೆ ದಾಳಿ ಮಾಡಿರುವ ಮಹಾನಗರ ಪಾಲಿಕೆ ಅಧಿಕಾರಿಗಳು 1,32,700 ರೂ ದಂಡ ವಿಧಿಸಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಅವರ ನೇತೃತ್ವದ ತಂಡ ನಗರದ ಕೆ.ಆರ್.ಮಾರುಕಟ್ಟೆಯಲ್ಲಿರುವ ವಿವಿಧ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಮಾರಾಟದ ಹಾಗೂ ಬಟ್ಟೆ ಅಂಗಡಿಗಳ ಮೇಲೆ ದಾಳಿ ಮಾಡಿದ್ದು, ಅಂದಾಜು ಒಂದು ಟನ್ ನಿಷೇಧಿತ ನಾನ್ ಓವನ್ ಪ್ಲಾಸ್ಟಿಕ್ ಬ್ಯಾಂಗ್ ಗಳನ್ನು ವಶಕ್ಕೆ ಪಡೆದು ಒಂದು 1,32,700 ರೂ ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಶ್ ತಿಳಿಸಿದ್ದಾರೆ.