ಟ್ರಾಕ್ಟರ್ ನಲ್ಲಿ ಉಳುಮೆ ಮಾಡಲು ಹೋಗಿದ್ದ ಯುವಕ ಅನುಮಾನಾಸ್ಪದ ಸಾವನಪ್ಪಿರುವ ಘಟನೆ ಕೋಲಾರ ತಾಲ್ಲೂಕು ಎಂ.ಮಲ್ಲಂಡಹಳ್ಳಿ ಗ್ರಾಮದ ಬಳಿ ನಡೆದಿದೆ.ಕೃಷಿ ಹೊಂಡಕ್ಕೆ ಟ್ರಾಕ್ಟರ್ ಬಿದ್ದಿದ್ದು ಯುವಕನ ಶವ ಹೊರಗೆ ಬಿದ್ದಿದೆ. 35 ವರ್ಷದ ಶ್ರೀಕಾಂತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕನಾಗಿದ್ದು, ಭಾನುವಾರ ಸಂಜೆ ಉಳುಮೆ ಮಾಡಲು ಯುವಕ ತೆರಳಿದ್ದ,ರಾತ್ರಿ ಮನೆಗೆ ಹೋಗಿರುವುದಿಲ್ಲ, ಆದರೆ ಸೋಮಾವಾರ ಶವವಾಗಿ ಪತ್ತೆಯಾಗಿದ್ದಾನೆ. ಇತ್ತೀಗೆ ಕುಟುಂಬದಲ್ಲಿ ಜಮೀನು ವಿವಾದವಿತ್ತು ಈ ಹಿನ್ನೆಲೆ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.