ಬೆಂಗಳೂರು: ಕ್ಯಾಬ್ ಚಾಲಕನ ಅಪಹರಣಮಾಡಿ, ಕಾರು ಮತ್ತು ಮೊಬೈಲ್ ದೋಚಿ ಪರಾರಿಯಾಗಿದ್ದ ರೌಡಿಶೀಟರ್ಸೇರಿ ಇಬ್ಬರನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರದ ಟಿ.ಸಿ.ಪಾಳ್ಯ ನಿವಾಸಿ ಶ್ರೀಕಾಂತ್ (23) ಮತ್ತು ಹೇಮಂತ್ ಕುಮಾರ್ (27) ಬಂಧಿತರು.ಆರೋಪಿಯಿಂದ 28 ಲಕ್ಷ ಮೌಲ್ಯದ ಒಂದು ಕಾರು ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ತನಿಖಾಧಿಕಾರಿಗಳುಹೇಳಿದರು.ಆರೋಪಿಗಳು, ಆ.27ರಂದು ದೊಮ್ಮಲೂರಿನ ಹೊರವರ್ತುಲ ರಸ್ತೆಯಲ್ಲಿ ಕ್ಯಾಬ್ ಚಾಲಕನನ್ನು ಅಪಹರಿಸಿದ್ದರು ಎಂದುಪೊಲೀಸರು ಹೇಳಿದರು