ಚಿತ್ರದುರ್ಗದ ಮುರುಘಾ ಮಠದ ಮುಂಬಾಗದ ಅರಸನ ಕೆರೆ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿದೆ. ಶನಿವಾರ ಮಧ್ಯಾಹ್ನ 12 ಗಂಟೆಗೆ ದೃಶ್ಯ ಕಂಡು ಬಂದಿದ್ದು ಪ್ರಾದೀಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಿದ್ದು ಸದಾ ನೀರಿನಿಂದ ತುಂಬಿದ್ದ ಕೆರೆ ಇದೀಗ ಖಾಲಿ ಖಾಲಿಯಾಗಿ ಕಲ್ಲು ಮಣ್ಣುಗಳಿಂದ ಕಸ ಕಡ್ಡಿಗಳಿಂದ ಆವೃತವಾಗಿದೆ. ಇನ್ನೂ ಕೂಸು ಹುಟ್ಟೋಕು ಮುಂಚೆ ಕುಲಾವಿ ಹೊಲಿಸದರು ಎಂಬಂತೆ ಕಾಮಗಾರಿ ಮುಂಚೆಯೇ ಕೆರೆಯನ್ನ ಕಾಲಿ ಮಾಡಿದ್ದು ಸ್ಥಳೀಯರು ನಗರಾಭಿವೃದ್ಧಿ ಪ್ರಾದೀಕಾರಕ್ಕೆ ಹಿಡಿ ಶಾಪ ಹಾಕುವಂತಾಗಿದೆ.