ಇಸ್ಲಾಂ ಧರ್ಮ ಇಡೀ ಜಗತ್ತಿಗೆ ಶಾಂತಿಯನ್ನು ಸಾರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ಈದ್ ಮಿಲಾದ್ ಹಬ್ಬದ ಹಿನ್ನಲೆ ತುಮಕೂರಿನ ಬಾರ್ ಲೈನ್ ರಸ್ತೆಯಲ್ಲಿರುವ ಮಕ್ಕಾ ಮಸೀದಿಗೆ ಭೇಟಿ ನೀಡಿದ ಅವರು ಬಳಿಕ ಮುಖಂಡರನ್ನ ಉದ್ದೇಶಿಸಿ ಶುಕ್ರವಾರ ಮಧ್ಯಾಹ್ನ 12 ರ ಸಮಯದಲ್ಲಿ ಮಾತನಾಡಿದರು. ಕ್ರಿ. ಪೂರ್ವ 650 ಕ್ಕೂ ಮೊದಲು ಮಹಮ್ಮದ್ ಪೈಗಂಬರ್ ಅವರು ಕೊಟ್ಟ ಶಾಂತಿಯ ಸಂದೇಶ ಸ್ಮರಣೀಯ ಎಂದರು.ಅಂದು ಅನೇಕ ಗುಂಪುಗಳಾಗಿದ್ದ ಸಂದರ್ಭದಲ್ಲಿ ಜಮ್ ಜಮ್ ಬೆಟ್ಟದ ಮೇಲೆ ನಿಂತು ಪೈಗಂಬರ್ ರು ಪ್ರವಚನ ನೀಡುತ್ತಾ ಶಾಂತಿ, ಸಹೋದರತೆಯಿಂದ ಇರಬೇಕು.ಸಂಯಮದಿಂದ ವರ್ತಿಸಬೇಕು ಎಂದು ಹೇಳುತ್ತಾರೆ. ಅವರ ಪ್ರವಚನಗಳು ಇಂದಿಗೂ ಅನುಕರಣಿಯ ಎಂದರು.