ಮಳವಳ್ಳಿ : ಪುರಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದ ಮಳವಳ್ಳಿ ಪಟ್ಟಣದ ಪೇಟೆ ಮುಸ್ಲಿಂ ಬ್ಲಾಕ್ ಬಡಾವಣೆಯ ವಾಸಿ ದಸ್ತಗೀರ್ ಪಾಷಾ ನಿಧನರಾಗಿದ್ದಾರೆ. 72 ವರ್ಷ ವಯಸ್ಸಿನ ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಭಾನುವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕೆಲವೇ ಕ್ಷಣದಲ್ಲಿ ನಿಧನರಾದರು ಎಂದು ಗೊತ್ತಾಗಿದೆ. ಮೃತರು ಪತ್ನಿ ಐವರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ವನ್ನು ಅಗಲಿದ್ದು ಭಾನುವಾರ ಸಾಯಂಕಾಲ 5 ಗಂಟೆ ಸುಮಾರಿಗೆ ಇವರ ಅಂತ್ಯಕ್ರಿಯೆ ಪಟ್ಟಣದಲ್ಲಿ ಜರುಗಿತು.