ಲಾರಿ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಮೂವರು ಬಾಲಕರು ಮೃತಪಟ್ಟಿರುವ ಘಟನೆ ಬಾಗಲಕೋಟೆ ನಗರದ ಹೊರವಲಯದ ಸೀಮಿಕೇರಿ ಬೈಪಾಸ್ ನಲ್ಲಿ ಜರುಗಿದೆ.ಮೃತರನ್ನ ಮುರನಾಳ ಗ್ರಾಮದ ಪ್ರೌಡಶಾಲಾ ಹಂತದ ವಿದ್ಯಾರ್ಥಿಗಳಾದ ಸಿದ್ದು(16),ಸಂತೋಷ(16),ಕಾಮಣ್ಣ (16) ಎಂದು ಗುರ್ತಿಸಲಾಗಿದೆ. ಸ್ಥಳಕ್ಕೆ ಕಲಾದಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಅಪಘಾತದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು ಒಂದೇ ದ್ವಿಚಕ್ರವಾಹನದಲ್ಲಿ ಅತೀವೇಗದಿಂದ ಬಂದು ಮುಂದೆ ಹೊರಟಿದ್ದ ಪಾದಾಚಾರಿಗಳಿಗೆ ಗುದ್ದಿ ಪಕ್ಕಕ್ಕೆ ಹೊರಟಿದ್ದ ಲಾರಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.