ಆಂಜನೇಯನ ದೇವಸ್ಥಾನದ ಸುತ್ತ ಭಂಡಾರದ ಮಳೆ ಸುರಿದಿದೆ ಎಂದು ನಂಹಿರುವ ಭಕ್ತರು ಆಶ್ಚರ್ಯ ಚಕಿತಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೆಗ್ಗೂರು ಗ್ರಾಮದಲ್ಲಿ ನಡೆದಿದೆ. ಹೆಗ್ಗೂರು ಗ್ರಾಮದ ಆರಾಧ್ಯ ದೈವ ಸಂಜೀವ ಮೂರ್ತಿ ದೇವಸ್ಥಾನ ಉರ್ಫ್ ಆಂಜನೇಯನ ದೇವಸ್ಥಾನದ ಆರಣದ ಸುತ್ತ ಭಂಡಾರದ ಪುಡಿ ಲಭ್ಯವಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ ಕಳೆದ ದಿನ ಸೆ.12.ರ ಸಂಜೆ ಹೊತ್ತು ಕೆಲಹೊತ್ತು ಮಳೆ ರೂಪದಲ್ಲಿ ಭಂಡಾರ ಸಿಂಪರಣೆ ಆಗಿದೆ,ಇದನ್ನ ಕಣ್ಣಾರೆ ನೋಡಿದ್ದಾಗಿ ಗ್ರಾಮದ ಹಿರಿಯ ಜೀವಿ ತೊಂಭತ್ತು ವರ್ಷದ ಸಿದ್ದವ್ವ ಎನ್ನುವ ವಯೋವೃದ್ಧರು ಹೇಳಿಕೊಂಡಿದ್ದಾರೆ.