ಅನ್ನೇಹಾಳ್ ಜಂಪಣ್ಣನಹಟ್ಟಿ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಹಮ್ಮಿಕೊಳ್ಳಲಾಗಿತ್ತು. ಚಿತ್ರದುರ್ಗ ತಾಲ್ಲೂಕಿನ ಅನ್ನೇಹಾಳ್ ಜಂಪಣ್ಣನಹಟ್ಟಿ ಗ್ರಾಮದಲ್ಲಿ 11 ಗಂಟೆಗೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಶ್ರೀ ಕೃಷ್ಣ ಯಾದವ ಯುವಕ ಸಂಘ ಹಾಗೂ ಶಾಲೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಾಲಾ ಮುಖ್ಯ ಶಿಕ್ಷಕರು ಸಿಬ್ಬಂದಿಗಳು ಕೃಷ್ಣ ಯಾದವ ಯುವಕ ಸಂಘದ ಪದಾಧಿಕಾರಿಗಳು ಹಾಜರಿದ್ದು ಕಾರ್ಯಕ್ರಮ ಅದ್ದೂರಿಯಾಗಿ ನಡೆದು ನೂರಾರು ಮಂದಿ ಆಗಮಿಸಿ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ.