ಮಾಲೂರು ನಗರಸಭೆಯಿಂದ ಲಾಟರಿ ಮೂಲಕ ನಿವೇಶನಗಳ ಹಂಚಿಕೆ : ಶಾಸಕ ಕೆ ವೈ ನಂಜೇಗೌಡ ನಗರದ ನಗರಸಭೆಯ ಸಭಾಂಗಣದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದಾರೆ. ನಗರಸಭೆಯ ಆಶ್ರಯ ಯೋಜನೆ ನಿವೇಶನ ಪಡೆಯಲು ಸಲ್ಲಿಕೆ ಮಾಡಿದ್ದ ೧೩೬೯ ಅರ್ಜಿಗಳ ಫಲಾನುಭವಿಗಳಲ್ಲಿ ೬೮೯ ಮಂದಿ ಫಲಾನುಭವಿಗಳು ಪೂರ್ಣವಾದ ದಾಖಲೆಗಳನ್ನು ಸಲ್ಲಿಸಿದ್ದು, ಉಳಿದ ೪೭೪ ಮಂದಿ ಸೆಪ್ಟಂಬರ್ ೧೫ ರೊಳಗೆ ಪೂರ್ಣ ದಾಖಲೆಗಳನ್ನು ನೀಡಿದರೆ ಅವರಿಗೂ ಸಹ ಲಾಟರಿ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ನಂತರ ದಾಖಲೆಗಳನ್ನು ಸಲ್ಲಿಸಿದವರನ್ನು ೨ನೇ ಹಂತದಲ್ಲಿ ಆಯ್ಕೆ ಮಾಡಲಾಗುವುದ