ರಭಸವಾಗಿ ಹರಿಯುತ್ತಿದ್ದ ನೀರಲ್ಲಿ ಬೈಕ್ ಓಡಿಸಲು ಹೋಗಿ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಸ್ನೇಹಿತನನ್ನ ಕಾಪಾಡಲು ಹೋಗಿ ಯುವಕನೊಬ್ಬ ನೀರು ಪಾಲಾಗಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಕರಾಯಪಟ್ಟಣ ಸಮೀಪದ ಸ್ಮಶಾನದ ಹೊಳೆಯಲ್ಲಿ ನಿನ್ನೆ ನಡೆದಿತ್ತು. ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಸ್ನೇಹಿತನ ಕಾಪಾಡಲು ಹೋಗಿ ಚಿಕ್ಕಮಗಳೂರು ತಾಲೂಕಿನ ಸಾದರಹಳ್ಳಿ ಗ್ರಾಮದ 27 ವರ್ಷದ ಯುವಕ ಯತೀಶ್ ನೀರು ಪಾಲಾಗಿದ್ದ. ನಿರು ಪಾಲಾಗಿದ್ದ ಯತೀಶನ ಶವಕ್ಕಾಗಿ ನಿನ್ನೆಯಿಂದಲೂ ಕೂಡ ನಿರಂತರವಾಗಿ ಶೋಧಕಾರಿಯ ನಡೆಸಲಾಗಿತ್ತು. ಶುಕ್ರವಾರ ಯತೀಶನ ದುಃಖ ದೇಹ ಪ್ರತ್ಯಯಾಗಿದ್ದು ಸ್ನೇಹಿತರು ಕಣ್ಣೀರು ಹಾಕಿದ್ದಾರೆ.