ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದ ಹಿನ್ನಲೆ ಇಂಡಿ ತಾಲೂಕಿನ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ಮಿರಗಿ ಗ್ರಾಮದ ಅಂಬಾಭವಾನಿ ದೇಗುಲಕ್ಕೆ ಜಲದಿಗ್ಬಂಧನವಾಗಿದೆ. ಮಿರಗಿ ಗ್ರಾಮದ ಸುತ್ತ ಭೀಮಾ ನದಿ ನೀರು ಆವರಿಸಿದೆ. ಪ್ರವಾಹದ ನೀರಲ್ಲೇ ದೇವಿ ದರ್ಶನ ಭಕ್ತರು ಪಡೆಯುತ್ತಿದ್ದಾರೆ. ಐದಾರು ಅಂಗಡಿಗಳು ಜಲಾವೃತವಾಗಿವೆ. ಮತ್ತಷ್ಟು ಪ್ರವಾಹ ಹೆಚ್ಚಾಗುವ ಹಿನ್ನಲೆ ಗ್ರಾಮಸ್ಥರಲ್ಲಿ ಆತಂಕಗೊಂಡಿದ್ದಾರೆ...