ಮಕ್ಕಳು ತಮ್ಮ ತಂದೆ ತಾಯಿಯವರಿಗೆ ಗೌರವ ನೀಡುವುದು ಕಡಿಮೆ ಆಗಿದೆ ; ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ನಟೇಶ.ಆರ್ ಮಕ್ಕಳು ತಮ್ಮ ತಂದೆ ತಾಯಿಯವರಿಗೆ ಗೌರವ ನೀಡುವುದು ಕಡಿಮೆ ಆಗಿದೆ. ಮಕ್ಕಳು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಯುವುದು ಬಹಳ ಅವಶ್ಯ, ಶಿಕ್ಷಣದೊಂದಿಗೆ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸಿದರೆ ಮಕ್ಕಳ ಬದುಕು ಉಜ್ವಲವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಟೇಶ.ಆರ್ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೋಲಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ, ಆರೋಗ್ಯ ಇಲ