ಚಿತ್ರದುರ್ಗ ನಗರದಲ್ಲಿಂದು ಹಿಂದೂ ಮಹಾ ಗಣಪತಿಯ ಉತ್ಸವ ಸಮಿತಿ ವತಿಯಿಂದ ಚಿತ್ರದುರ್ಗದ ದೇವತೆಗಳ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ವಿಶ್ವ ಹಿಂದೂ ಮಹಾ ಗಣಪತಿಯನ್ನ ಪ್ರತಿಷ್ಟಾಪನೆ ಮಾಡಿದ್ದು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗದ ನವ ದುರ್ಗೆಯರಿಗೆ ವಿಶೇಷ ಪೂಜೆ ಪುನಸ್ಕಾರ ಹಮ್ಮಿಕೊಂಡಿದ್ದು ನಗರದ ಸಿಹಿ ನೀರು ಹೊಂಡದಲ್ಲಿ ದೇವರುಗಳಿಗೆ ಗಂಗಾ ಪೂಜೆಯ ಮೂಲಕ ಮೆರವಣಿಗೆ ನಡೆಸಲಾಯಿತು. ಇನ್ನೂ ನಗರದ ಪ್ರಮುಖ ಬೀದಿಗಳಲ್ಲಿ ದೇವತೆಗಳು ಮೆರವಣಿಗೆ ನಡೆಸಿ ಹಿಂದೂ ಮಹಾ ಗಣಪತಿ ಮಂಟಪದ ಬಳಿ ಆಗಮಿಸಿದ್ದು ಪ್ರತಿಷ್ಠಾಪನೆ ಮಾಡಲಾಯಿತು.