ಕಲಬುರಗಿ : ಧರ್ಮಸ್ಥಳ ವಿರುದ್ಧ ಅಪ್ರಚಾರ ಮತ್ತು ಷಡ್ಯಂತ್ರ ಖಂಡಿಸಿ ಕಲಬುರಗಿ ಜಿಲ್ಲೆ ಶಹಬಾದ್ ಪಟ್ಟಣದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ.. ಆಗಷ್ಟ್ 26 ರಂದು ಮಧ್ಯಾನ 1 ಗಂಟೆಗೆ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ನೇತೃತ್ವದಲ್ಲಿ ಶಹಬಾದ್ ಬಿಜೆಪಿ ಮಂಡಳ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶಿಲ್ದಾರ್ ಕಚೇರಿವರೆಗೆ ಪ್ರತಿಭಟನ ಮೆರವಣಿಗೆ ನಡೆಸಿದರು. ಇನ್ನೂ ಹಿಂದೂಗಳ ಪವಿತ್ರ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪ್ರಚಾರ ನಡೆಸಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡ್ತಿದ್ದು, ಅಪ್ರಚಾರ ನಡೆಸ್ತಿರೋ ತಿಮ್ಮರೋಡಿ, ಮಟ್ಟಣ, ಸಮೀರ್ ವಿರುದ್ಧ ಸರ್ಕಾರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.