ಮಳವಳ್ಳಿ : ತಾಲ್ಲೂಕಿನ ಮಲ್ಲಿ ಕ್ಯಾತನಹಳ್ಳಿ ಗ್ರಾಮದ ಗೌರಿ ಪುತ್ರರ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಲಾಗಿದ್ದ ಗಣೇಶನ ಮೂರ್ತಿಯ ವಿಸರ್ಜನೆ ಕಾರ್ಯ ಶುಕ್ರವಾರ ಸಂಜೆ ಜರುಗಿತು. ಕಳೆದ ಬುಧವಾರ ಪ್ರತಿಷ್ಠಾಪಲಾ ಗಿದ್ದ ಗಣೇಶ ಮೂರ್ತಿಯನ್ನು ಮೂರು ದಿನಗಳ ಕಾಲ ಪೂಜೆ ಸಲ್ಲಿಸಿದ ನಂತರ ಶುಕ್ರವಾರ ಸಂಜೆ 9.30 ರ ಸಮಯದಲ್ಲಿ ವರ್ಣರಂಜಿತ ಮೆರವಣಿಗೆ ಮೂಲಕ ನೆಟ್ಕಲ್ ಕೆರೆಗೆ ನೀರು ಪೂರೈಕೆ ಮಾಡುವ ನಾಲೆಯಲ್ಲಿ ವಿಸರ್ಜನೆ ಮಾಡಿದರು. ಈ ಗಣೇಶೋತ್ಸವದಲ್ಲಿ ಗ್ರಾಮದ ಮುಸ್ಲಿಂ ಭಾಂದವರು ಪಾಲ್ಗೊಂಡಿ ದ್ದರ ಜೊತೆಗೆ ಮೆರವಣಿಗೆಯಲ್ಲಿ ಭಾಗವಹಿದ್ದವರಿಗೆ ತಂಪು ಪಾನೀಯ ವಿತರಿಸುವ ಮೂಲಕ ತಮ್ಮ ಭಾವೈಕ್ಯತೆ ಮೆರೆದರು.