ಇತ್ತೀಚಿನ ಭಾರೀ ಮಳೆಯಿಂದ ಬಳ್ಳಾರಿಯ ವಲಿ ಸಾಬ್ ಕಾಂಪೌಂಡ್ ಪ್ರದೇಶದಲ್ಲಿ ನೀರು ನುಗ್ಗಿ ಬಡಜನರು ಸಂಕಷ್ಟಕ್ಕೆ ಸಿಲುಕಿದ್ದರು.ಆಗಸ್ಟ್ 24,ಭಾನುವಾರ ಬೆಳಿಗ್ಗೆ 10ಗಂಟೆ ಸುಮಾರಿಗೆ ಸ್ಥಳಕ್ಕೆ ಮಾಜಿ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ, ಜೆಸಿಬಿ ಮೂಲಕ ನೀರು ತೆರವುಗೊಳಿಸುವಂತೆ ಮಾಡಿ ತಕ್ಷಣದ ಪರಿಹಾರ ಒದಗಿಸಿದರು. ಅಲ್ಲದೆ, 20 ಸೋಲಾರ್ ಬೀದಿ ದೀಪ, ಶೌಚಾಲಯ, ಶುದ್ಧ ಕುಡಿಯುವ ನೀರು, ಕಸ ವಿಲೇವಾರಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಯಿತು.ಹಲವಾರು ವರ್ಷಗಳಿಂದ ಬಡಜನರು ಗುಡಿಸಲಲ್ಲಿ ವಾಸಿಸುತ್ತಿದ್ದು, ಇವರಿಗೆ ಶಾಶ್ವತ ನಿವಾಸ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಶ್ರೀರಾಮುಲು ಒತ್ತಾಯಿಸಿದರು