ಅಗಸ್ಟ್ 23,ಶನಿವಾರ ಸಂಜೆ 6 ಗಂಟೆಗೆ ಬಳ್ಳಾರಿ ಜಿಲ್ಲೆ, ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ತಾಲೂಕ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕಂಪ್ಲಿಯ ಭಗತ್ ಸಿಂಗ್ ಬಾಯ್ಸ್ ಖೋ-ಖೋ ತಂಡ ಅದ್ಭುತ ಪ್ರದರ್ಶನ ತೋರಿದೆ. ಈ ತಂಡವು ಕಠಿಣ ಸ್ಪರ್ಧೆಯಲ್ಲಿ ಎದುರಾಳಿಗಳನ್ನು ಮಣಿಸಿ ಪ್ರಥಮ ಸ್ಥಾನ ಗಳಿಸಿದೆ. ವಿಶೇಷವೆಂದರೆ, ಈ ತಂಡವು ಸತತ 5 ವರ್ಷಗಳಿಂದಲೂ ತಾಲೂಕು ಮಟ್ಟದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.ಈ ಜಯದೊಂದಿಗೆ ಭಗತ್ ಸಿಂಗ್ ಬಾಯ್ಸ್ ತಂಡವು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ