ನಗರದ ಕೋಟೆ ಬಡಾವಣೆಯ ಕಿಲ್ಲೇ ಬೃಹನ್ಮಠದ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗೋಲ್ಡನ್ ಗಣೇಶನನ್ನ ನೋಡಲು ಶನಿವಾರ ಗ್ರಾಮೀಣ ಪ್ರದೇಶಗಳಿಂದ ಭಕ್ತರು ಆಗಮಿಸಿದ್ದರು. ಗೋಲ್ಡನ್ ಗಣೇಶ ಭಕ್ತರ ಗಮನ ಸೆಳೆಯುವ ಕೇಂದ್ರವಾಗಿದೆ. ನಗರದಲ್ಲಿ ಅನೇಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದರು, ಗೋಲ್ಡನ್ ಗಣೇಶ ಭಕ್ತರನ್ನು ಸೆಳೆಯುತ್ತಿದ್ದಾನೆ. ಕೋಟಿ ಗಜಾನನ ಮಿತ್ರ ಮಂಡಳಿಯವರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ನಿತ್ಯ ಭಕ್ತರು ಗಣಪತಿ ಮೂರ್ತಿಯ ದರ್ಶನ ಪಡೆಯುತ್ತಿದ್ದಾರೆ. ಕುತೂಹಲದಿಂದ ಬಂದು ಗಣಪನನ್ನು ನೋಡುತ್ತಿದ್ದಾರೆ. ಸಂಜೆ ವೇಳೆಗೆ ನಿತ್ಯ ವಿಶೇಷ ಪೂಜಾ ಪುನಸ್ಕಾರಗಳಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.