ಆಕ್ಸಿಜನ್ ತಗೆದರೇ ಮಗು ಸಾಯುತ್ತದೆ ಎಂದು ಹೇಳಿ ಖಾಸಗಿ ಆಸ್ಪತ್ರೆಯವರು ಕಳುಹಿಸಿಕೊಟ್ಟ ಬಳಿಕ, ಮಗು ಸತ್ತಿದೆ ಎಂದು ಊರಿಗೆ ಮರಳುತ್ತಿದ್ದ ಮಾರ್ಗದಲ್ಲಿ ಮಗು ಜೋರಾಗಿ ಅತ್ತು ಉಸಿರಾಡಿದೆ, ತತ್ ಕ್ಷಣ ಪೋಷಕರು ಮಗುವನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮೂಡಿಗೆರೆ ತಾಲೂಕು ಲೋಕವಳ್ಳಿ ಗ್ರಾಮದ ಕಾಫಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸುಪ್ರಿತ್ ಹರೀಶ್ ಎಂಬುವರ ಮಗುವಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಮೂಡಿಗೆರೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ದಿನ ಚಿಕಿತ್ಸೆ ನೀಡಿದ ವೈದ್ಯರು ಚಿಕಿತ್ಸೆ ಫಲಕಾರಿಯಾಗಿಲ್ಲ, ಆಕ್ಸಿಜನ್ ತಗೆದರೆ ಮಗು ಸಾಯುತ್ತದೆ ಎಂದು ಹೇಳಿ ಮನೆಗೆ ವಾಪಾಸ್ ಕಳುಹಿಸಿದ್ದಾರೆ.ಪೋಷಕರು ಮಗು ಸತ್ತೆ ಹೋಗಿದೆ ಎಂದು ಭಾವಿಸಿ