ಕಲಬುರಗಿ : ಹಳೆ ವೈಷಮ್ಯ ಹಿನ್ನಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಕಲಬುರಗಿ ತಾಲೂಕಿನ ಸೀತನೂರು ಗ್ರಾಮದಲ್ಲಿ ಆ31 ರಂದು ಬೆಳಗ್ಗೆ 8 ಗಂಟೆಗೆ ಸಂಭವಿಸಿದೆ.. 68 ವರ್ಷದ ಶಿವರಾಜ್ ಮಾಲೀಪಾಟೀಲ್ ಕೊಲೆಯಾದ ವ್ಯಕ್ತಿಯಾಗಿದ್ದಾರೆ.. 2008 ರಲ್ಲಿ ನಾಗೇಂದ್ರ ಕೊಲೆ ಪ್ರಕರಣದಲ್ಲಿ ಶಿವರಾಜ್ ಆರೋಪಿಯಾಗಿದ್ದನು.. ಘಟನ ಸ್ಥಳಕ್ಕೆ ಫರಹತ್ತಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..