ಕೇಂದ್ರ GST ವಿಚಾರಕ್ಕೆ ಸಂಬಂಧಿಸಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್ ಬಿ ತಿಮ್ಮಾಪೂರ್ ಅವರು, ಇದರಿಂದ ರಾಜ್ಯ ಸರ್ಕಾರಕ್ಕೆ ನಷ್ಟ ಆಗುತ್ತೆ ಅಂತಾ ಹೇಳಕ್ಕೆ ಆಗಲ್ಲ. ಕೆಲವು ವಿಚಾರದಲ್ಲಿ GST ಕಡಿಮೆ ಆಗಿದೆ. ಅದೇನೂ ದೊಡ್ಡ ಬಂಪರ್ ಅಲ್ಲ ಕೊಡುಗೆನೂ ಅಲ್ಲ. ಮೊದಲು ಇವರು GST ಹಾಕಿದ್ದೇ ತಪ್ಪು. ಈಗ ಅದನ್ನು ತೆಗೆದಿದ್ದೇವೆ ಅನ್ನೋದು ಹಾಸ್ಯಾಸ್ಪದ. ಜನರಿಗೆ ದಾರಿ ತಪ್ಪಿಸೋ ಕೆಲಸ ಕೇಂದ್ರ ಸರ್ಕಾರದವರು ಮಾಡುತ್ತಿದ್ದಾರೆ. ನಮ್ಮ GST ಹಣವನ್ನೇ ಇವರು ನೀಡಿಲ್ಲ ಎಂದು ಆರೋಪಿಸಿದರು.