ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿನ ಜಿಲ್ಲಾಡಳಿತ ಭವನ ಮುಂದೆ ಇತ್ತೀಚೆಗೆ ಚಾಲಕ ಬಾಬುರವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಸಂಸದ ಡಾ.ಕೆ ಸುಧಾಕರ್ ರವರು ಏ-1 ಆರೋಪಿಯಾಗಿದ್ದರೆ,ನಾಗೇಶ್ ಮತ್ತು ಮಂಜುನಾಥ್ ಏ-2 ಆರೋಪಿಗಳಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಚಿಕ್ಕಬಳ್ಳಾಪುರ ನಗರದ ಜನಪ್ರತಿನಿಧಿಗಳ ನ್ಯಾಯಾಲಯವು ಆರೋಪಿ ನಾಗೇಶ್ ಮತ್ತು ಮಂಜುನಾಥ್ ರವರಿಗೆ ಷರತ್ತು ಬದ್ಧ ಜಾಮೀನನ್ನು ನೀಡಿದೆ ಎಂದು ಅವರ ಪರವಾಗಿರುವ ವಕೀಲ ದೇವದಾಸ್ ರವರು ನಗರದಲ್ಲಿ ಇಂದು ಮಾಹಿತಿ ನೀಡಿದ್ದಾರೆ.