ಹಿರಿಯೂರು ನಗರಸಭೆ ವಾರ್ಡ್ ನಂ. 30-31 ರಲ್ಲಿ ನಡೆದಿರುವ ಸ್ಪಂಬೋರ್ಡ್ ಮನೆಗಳ ಅಕ್ರಮದ ಬಗ್ಗೆ ತನಿಖೆ ಮಾಡಲು ಆಗ್ರಹಿಸಿ ಹಿರಿಯೂರು ನಗರಸಭೆ ಬಳಿ ಅನಿರ್ಧಿಷ್ಟಾವದಿ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಹಿರಿಯ ನಾಗರೀಕರ ವೇಧಿಕೆ ಇವರ ವತಿಯಿಂದ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಹರಿಶ್ಚಂದ್ರಘಾಟ್‌ನ 30-31 ನೇ ವಾರ್ಡಿನಲ್ಲಿ ಹಕ್ಕು ಪತ್ರ ಕೊಟ್ಟಿರುವ ಜಾಗದಲ್ಲಿ ಸ್ಪಂಬೋರ್ಡಿಂದ ಮರು ಮನೆ ನಿರ್ಮಾಣ ಮಾಡಲು ಇವರಿಗೆ ಅವಕಾಶ ಕೊಟ್ಟವರು ಯಾರು ಇದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.