Download Now Banner

This browser does not support the video element.

ಹಾಸನ: ಅಂಗಡಿ ಮೇಲ್ಭಾಗದ ಶೀಟ್ ತೆಗೆದು ದಿನಸಿ ಸಾಮಗ್ರಿ ಕಳ್ಳತನ! ಮಾರಿಗುಡಿ ಕೊಪ್ಪಲಿನಲ್ಲಿ ಘಟನೆ

Hassan, Hassan | Aug 22, 2025
ಹಾಸನ : ಅಂಗಡಿ ಮೇಲ್ಬಾಗದ ಜಿಂಕ್ ಶೀಟ್ ತೆಗೆದು ದಿನಸಿ ಸಾಮಗ್ರಿ ಕಳವು ಮಾಡಿರುವ ಪ್ರಕರಣ ತಾಲೂಕಿನ ಮಾರಿಗುಡಿಕೊಪ್ಪಲಿನಲ್ಲಿ ನಡೆದಿದೆ. ಗ್ರಾಮದ ಮಾರಿಗುಡಿಲಪ್ಪಲು ಆರ್ಚ್ ಇರುವ ಮಳಿಗೆಯಲ್ಲಿ ಕೃಷ್ಣ ಎಂಬುವವರು ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಆ. 21 ರ ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ತೆರಳಿದ್ದು ಆ.22 ರ ಬೆಳಗ್ಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಮೇಲ್ಬಾಗದ ಶೀಟ್ ತೆರೆದಿರುವುದು ಕಂಡು ಬಂದಿದೆ. ಡ್ರಾಯರ್‌ನಲ್ಲಿದ್ದ 8500ರೂ ನಗದು, ಸಿಗರೇಟ್ ಪ್ಯಾಕ್, 5 ಎಣ್ಣೆ ಕ್ಯಾನ್, ಹಾರ್ಲಿಕ್ಸ್ ಬಾಟಲಿಗಳ ಸೇರಿ 38500 ರೂ ಮೌಲ್ಯದ ದಿನಸಿ ಸಾಮಗ್ರಿಗಳು ಕಳವು ಮಾಡಿದ್ದಾರೆ.
Read More News
T & CPrivacy PolicyContact Us