ವಾಲ್ಮೀಕಿ ಸಂಘದ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ಕೈಬಿಡುವಂತೆ ನಗರದಲ್ಲಿ ತಾಲೂಕ ದಂಡಾಧಿಕಾರಿಗಳಿಗೆ ಮಹರ್ಷಿ ವಾಲ್ಮೀಕಿ ನಾಯಕ ಸಂಘಟನೆ ಮನವಿ ಯಾದಗಿರಿ ನಗರದಲ್ಲಿ ಸೆಪ್ಟೆಂಬರ್ 1ರಂದು ಕೂಲಿ ಕಬ್ಬಲಿಗ, ಅಂಬಿಗ, ಬೆಸ್ತ, ಜನಾಂಗದವರು ಪ್ರತಿಭಟನೆ ನಡೆಸಿ ವಾಲ್ಮೀಕಿ ಸಂಘಟನೆಯ ಹೋರಾಟಗಾರರ ಹೋರಾಟವನ್ನು ಕುಗ್ಗಿಸುವ ಯತ್ನ ಹಾಗೂ ಸುಳ್ಳು ಪ್ರಕರಣ ದಾಖಲಿಸಿದ್ದು ಪ್ರಕರಣ ಕೈಬಿಡುವಂತೆ ಸುರಪುರ ನಗರದಲ್ಲಿ ತಾಲೂಕ ದಂಡಾಧಿಕಾರಿಗಳಿಗೆ ಸುರಪುರ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದರು