ಕಾಮಗಾರಿ ಗುತ್ತಿಗೆಯಲ್ಲಿ ನಮಗೆ ಮೋಸ ಆಗುತ್ತಿದೆ ಎಂದು ಕೋಲಾರ ಜಿಲ್ಲೆಯ ಪರಿಶಿಷ್ಟ ವರ್ಗಕ್ಕೆ ಸೇರಿರುವ ಸಣ್ಣ ಗುತ್ತಿಗೆದಾರರು ಜಿಲ್ಲಾಧಿಕಾರಿ ಕಚೇರಿಯ ಬಳಿ ಶುಕ್ರವಾರ ಆಕ್ರೋಷ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಗುತ್ತಿಗೆಗಳನ್ನು ಟೆಂಡರ್ ಮುಖಾಂತರ ಪ್ರಕ್ರಿಯೆ ಮಾಡಲಾಗುತ್ತಿದೆ, ಆದ್ರೆ ನಮಗೆ ಗುತ್ತಿಗೆಗಳು ಸಿಗುತ್ತಿಲ್ಲ.ಸಣ್ಣ ಪ್ರಮಾಣದಲ್ಲಿ ಕಾಮಗಾರಿಗಳನ್ನು ಪ್ಯಾಕೇಜ್ ಗಳನ್ನು ಮಾಡಲಾಗುತ್ತಿದೆ.ಪರಿಣಾಮ ಸಣ್ಣ ಗುತ್ತಿಗೆದಾರರಿಗೆ ಯಾವುದೇ ಕಾಮಗಾರಿಗಳು ಸಿಗುತ್ತಿಲ್ಲ.ಎಸ್ ಎಸಿ, ಎಸ್ ಟಿ ಮತ್ತು ಒಬಿಸಿ ನವರಿಗೆ ಗುತ್ತಿಗೆಯನ್ನು ನೀಡಲು ಮೀಸಲಾತಿ ಕಾನೂನು ಇದೆ.ಆದರೆ ಇದಕ್ಕೆ ವಿರುದ್ದವಾಗಿ ಪ್ಯಾಕೇಜ್ ಗಳನ್ನು ಮಾಡುವ ಮೂಲಕ ನಮಗೆ ಕಾಮಗಾರಿಗಳು ಸಿಗದಂತೆ ಮಾಡಲಾಗಿದೆ ಅಂತ ಆರೋಪಿಸಿದರು