ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಗದಗ ತಾಲ್ಲೂಕಿನ ಹಿರೇಕೊಪ್ಪ ಗ್ರಾಮದ ಯೋಧ ಮಂಜುನಾಥ ಮಲ್ಲಪ್ಪ ಗಿಡ್ಡಮಲ್ಲಣ್ಣವರ ಕರ್ತವ್ಯದಲ್ಲಿದ್ದಾಗಲೇ ವೀರಮರಣವನ್ನಪ್ಪಿದ್ದಾನೆ. ಪ್ರಸ್ತುತ ಪಂಜಾಬ ರಾಜ್ಯದ ಜಲಂಧರ್‌ನಲ್ಲಿ ಇರುವ 'ಎಎಸ್‌ಸಿ' ಸೆಂಟರ್‌ನಲ್ಲಿ ಯೋಧನಾಗಿ 13 ಷರ್ವಗಳಿಂದ ಕರ್ತವ್ಯದ ಮೇಲಿದ್ದ. ಸೇನೆಯ ವಸತಿ ಗೃಹದಲ್ಲಿ ಕುಟುಂಬ ಸಹಿತ ವಾಸವಾಗಿದ್ದ ಯೋಧನ ಮಂಜುನಾಥ ಮಂಗಳವಾರ ಬೆಳಿಗ್ಗೆ ಹುತಾತ್ಮರಾಗಿದ್ದಾರೆ.