ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ದಿಗ್ಗಿ ಗ್ರಾಮದಲ್ಲಿ ಕುರಿಗಳನ್ನು ಕಟ್ಟಿ ಹಾಕಲಾಗಿದ್ದ ಮನೆಗೆ ಆಕಸ್ಮಿಕ ಬೆಂಕಿ ಬಿದ್ದು 11 ಕುರಿಗಳು ಸುಟ್ಟು ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.ದಿಗ್ಗಿ ಗ್ರಾಮದ ಬಸ್ಸಮ್ಮ ಮ್ಯಾಗಲಮನಿ ಎನ್ನುವ ಮಹಿಳೆಗೆ ಸೇರಿದ ಮನೆಯಲ್ಲಿ ದುರ್ಘಟನೆ ಸಂಭವಿಸಿದೆ. ಎಂದಿನಂತೆ ಕುರಿಗಳನ್ನು ನೆನೆಸಿಕೊಂಡು ಬಂದು ರಾತ್ರಿ ಮನೆಯಲ್ಲಿ ಕಟ್ಟಿ ಹಾಕಿದ ಸಂದರ್ಭದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸಾಲ ಮಾಡಿ ಕುರಿಗಳನ್ನು ಖರೀದಿಸಲಾಗಿದ್ದು ಕುರಿಗಳು ಸಾವನ್ನಪ್ಪಿದ್ದರಿಂದ ತುಂಬಾ ನಷ್ಟ ಉಂಟಾಗಿದೆ ಸರಕಾರ ಪರಿಹಾರ ನೀಡುವಂತೆ ಬಸ್ಸಮ್ಮ ಕಣ್ಣೀರು ಸುರಿಸಿದ್ದಾರೆ.ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು ಭೀಮರಾಯನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.