ದಾಂಡೇಲಿ : ದಾಂಡೇಲಿ ನಗರದ ಪ್ರಮುಖ ರಸ್ತೆಯಾಗಿರುವ ಜೆ.ಎನ್ ರಸ್ತೆ ಮತ್ತು ಹಳೆ ದಾಂಡೇಲಿ ಯಿಂದ ಪಟೇಲ್ ನಗರಕ್ಕೆ ಹೋಗುವ ರಸ್ತೆ ತೀವ್ರ ಹದಗೆಟ್ಟಿದ್ದು, ಇಲ್ಲಿಯ ರಸ್ತೆ ದುರಸ್ತಿ ಹಾಗೂ ರಸ್ತೆ ಕಾಮಗಾರಿಗೆ ಇನ್ನೂ ಎರಡುವರೆ ತಿಂಗಳೊಳಗೆ ಚಾಲನೆಯನ್ನು ನೀಡಲಾಗುತ್ತದೆ ಎಂದು ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ಪೌರಾಯುಕ್ತ ವಿವೇಕ ಬನ್ನೆ ಮತ್ತು ನಗರ ಸಭಾ ಸದಸ್ಯ ಮೋಹನ ಹಲವಾಯಿ ಅವರು ಹೇಳಿದರು. ಅವರು ಇಂದು ಶುಕ್ರವಾರ ಬೆಳಗ್ಗೆ 11:30 ಗಂಟೆ ಸುಮಾರಿಗೆ ದಾಂಡೇಲಿ ನಗರ ಸಭೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದರು. ನಗರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನಗಳನ್ನು ದೇಶಪಾಂಡೆ ಅವರು ತಂದಿದ್ದಾರೆ. ನಿನ್ನೆ ರೂ.5.77.65 ಲಕ್ಷ ರೂಪಾಯಿಗಳ ವಿವಿಧ 47 ಅಭಿವೃದಿ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಗಿದೆ ಎಂದರು